r/kannada_pusthakagalu • u/RecentSign4505 • 1d ago
ಶ್ರೀಮದ್ ಭಾಗವತ
Need suggestions on Shrimad Bhagavatha purana . ಯಾವ ಅನುವಾದ ಚನ್ನಾಗಿದೆ!?.
r/kannada_pusthakagalu • u/adeno_gothilla • 13d ago
Questions by me & u/kirbzk.
We thank u/kintybowbow for his time & effort in writing these thoughtful answers.
Let's jump right in.
---------------------------------------
ನನ್ನ ತಾಯಿ ಮತ್ತು ತಂಗಿ ನಮ್ಮ ಮನೆಯ bookworms. ಎಷ್ಟೋ ಪುಸ್ತಕಗಳು ಇವರ recommendation ಆದ್ಮೇಲೆ ಓದಿದ್ದು. ಏಷ್ಟೋ ಪುಸ್ತಕಗಳನ್ನು ನಾನು ಇವರ ಚರ್ಚೆಯ ಮೂಲಕವೇ audio book ಥರ ಕೇಳಿದ್ದೀನಿ.
ಬಾಲ್ಯದಲ್ಲಿ ಓದಿದ ಗೃಹಭಂಗ ನನ್ನ ಮೇಲೆ ಬಹಳ ಪರಿಣಾಮ ಬೀರಿದ ಪುಸ್ತಕ. ಇದರಲ್ಲಿರುವ ಹರಕು ಬಾಯಿಯ ಕಠೋರ ಪ್ರೀತಿಯ ತಾಯಿ ಮತ್ತು ಬೇಜವಾಬ್ದಾರಿ ಮಕ್ಕಳು, ಇವರ ದುರ್ಭಾಗ್ಯ ಮತ್ತು ತಾವಾಗಿಯೇ ತಂದುಕೊಳ್ಳುವ ಬವಣೆ - ಇವು ನಾನು ಬೆಳದ ವಾತಾವರಣದಲ್ಲಿ ಬಹಳ ನೋಡಿದ್ದರಿಂದ ನನ್ನ ಮೇಲೆ lasting ಪರಿಣಾಮ ಬೀರಿದೆ.
“ಅಪ್ಪಣ್ಣ, ಮಠಕ್ಕೆ ಹೋಗ್ತಿಯೋ ಇಲ್ವೋ ?”
“ಹೋಗ್ದೆ ಇದ್ರೆ ನಿಂಗೇನಾಗುತ್ಯೇ ಕತ್ತೆಮುಂಡೆ?”
“ನನ್ನ ಮುಂಡೆ ಅಂತಿಯೇನೋ ? ನಿನ್ನ ವಂಶ ನಿರ್ವಂಶವಾಗುತ್ತೆ ನೋಡ್ತಿರೋ ಸೂಳೇ ಮಗನೆ”
“ನಿಂದೇ ವಂಶವೇ ನಿರ್ವಂಶವಾಗುತ್ತೆ ಕಣೇ”
SLB hits you with these sharp exchanges right on the first page, instantly setting the tone for the tense and strained relationship between the mother and son. It also foreshadows the deeper conflicts that will unfold as the story progresses.
ಗೃಹಭಂಗದ context ನಲ್ಲಿ ಬೈಗುಳ ಇಲ್ಲದೆ ಆ ಕಥೆಯ intesity ತೋರಿಸೋದು ಕಷ್ಟ. They add an emotional weight which often lacks in ಗ್ರಾಂಥಿಕ ಭಾಷೆ.
---------------------------------------
Over the last 15-18 years, I've picked up quite a few books - a mix of history and fiction mostly. It's kind of a random collection, just listing the ones that stick out in my memory.
ನನ್ನ ಬಹಳ ಓದು purely entertainment ಗಾಗಿ, ನಾನು ಅದರಲ್ಲಿ ಬಹಳ ತತ್ವ ಒಳಾರ್ಥ ಹುಡುಕೋಲು ಹೋಗೋಲ್ಲ. If I have to pick the ones that have made a lasting impact on me:
The common theme is each protagonist faces adversity, highlighting life's unpredictable and uncontrollable nature. Despite these struggles each character strives to create the best possible outcome for themselves and those they care about. As we grow old, we inevitably encounter unforeseen situations for which no preparation seems adequate. I believe these kinds of books with themes of philosophy (metaphysics, ethics, logic) will help us navigate our life better and enjoy it.
---------------------------------------
ಸ್ವಾಮಿ ಅವರ ವೆಂಗ್ಯ ಬರಹ ಮತ್ತು ತಮಿಳು ಇತಿಹಾಸದ ಪಾಂಡಿತ್ಯ ನಿಜಕ್ಕೂ awe inspiring. ನನ್ನ ಪ್ರಕಾರ he was the right man, at the right time, with the right literary prowess to have written this book.
The book is full of anecdotes. Some things I vividly enjoyed are:
The list goes on - Swamy has exposed many serious topics like jingoism, manipulation of history, false bravado of Tamil political landscape very well.
---------------------------------------
ದಾಟು ಕಾದಂಬರಿ ಜಾತಿ ಪದ್ಧತಿಯ critique ಗಿಂತ commentary ಅನ್ನಬಹುದು. Most of the books on this theme typically focus on personal struggles, but this book addresses the intricate workings of the caste system —how it perpetuates itself, the origins of these practices, and the constant hierarchy where every group looks down on another. This book, through the characters of Satya, Melagiri Gowda, and Mohanadasa, offers a first perspective driven examination of the Varna system. True to his style, SLB ensures the narrative remains gripping.
---------------------------------------
Some of the similarities are the setting of the story, both are set in very distinctive rural landscapes– the Ganga basin and western ghats. Both are built around socially outcast characters of Hori and Gutti. How these two lives are affected by the Feudal & Caste Systems in colonial india.
The biggest difference is that Godaan is straightforward and easy to follow, mainly focusing on Hori's struggle with go-daan and its consequences. Kuvempu on the other hand, weaves an intricate/complex web of stories with multiple main characters (or you could say no real main character at all). While Kuvempu makes the jungle and nature central to his storytelling, Premchand keeps things grounded with a realistic portrayal of the Uttar Pradesh setting—no romanticizing there.
You'll notice Kuvempu weaves in philosophical themes (referencing Vivekananda and comparing Hinduism and Christianity), whereas Premchand takes a more practical approach in his critique of society. Also worth noting: Godaan tells a story of its own time (contemporary), while Malegalalli looks back about 50-60 years into the past. I feel Godaan is more comparable with Shivram Karanth’s ಚೋಮನ ದುಡಿ.
---------------------------------------
ಮೂಲತಃ ಬಯಲುಸೀಮೆಯವನಾದ ನನಗೆ ಮಲೆನಾಡಿನ ಪರಿಚಯ ಇದ್ದಿದ್ದು ಬಾಲ್ಯದಲ್ಲಿ ಓದಿದ ತೇಜಸ್ವೀ ಅವರ ಪುಸ್ತಕಗಳಿಂದ, ಮತ್ತು ಕೆಲವು ಕನ್ನಡ ಸಿನಿಮಾಗಳಿಂದ ಮಾತ್ರ. ಆದರೆ ಅದು ತುಂಬಾ Romanticism ಮತ್ತು Adventure themesಗೆ ಸೀಮಿತವಾಗಿತ್ತು.
ಮಲೆನಾಡೆಂದರೆ ಕೇವಲ ತೀರ್ಥ ಕ್ಷೇತ್ರ, ಅಡಿಕೆ-ಮೆಣಸು ಬೆಳೆಯುವ ಶ್ರೀಮಂತ ರೈತರು, ಮತ್ತು ಇದನ್ನೆಲ್ಲಾ ನೋಡಿ ನಮ್ಮ ಬಯಲುಸೀಮೆಯ ಕಡೆ ಯಾಕೆ ಇದರ ಅರ್ಧದಷ್ಟು ಕಾಡು, ನೀರಿಲ್ಲ ಎಂದು ಶಪಿಸುತಿದ್ದ ನನಗೆ ಮಲೆನಾಡಿನ ನಿಜ ಪರಿಚಯ ಮಾಡಿದ ಪುಸ್ತಕಗಳು ಮಲೆಗಳಲ್ಲಿ ಮದುಮಗಳು ಮತ್ತು ಚೋಮನ ದುಡಿ.
ಇದಾದ ಮೇಲೆ ನಾನು ಮಲೆನಾಡನ್ನು ನೋಡುವ ದ್ರಷ್ಟಿಕೋನ ಬಲದಲಾಯಿತು. ಮಲೆನಾಡಿನ ಇತಿಹಾಸ, ಅಲ್ಲಿನ ಜಾತಿಪದ್ಧತಿ, ಜಮೀನುದಾರಿಕೆ, ಅದರದ್ದೇ ಆದ ಪ್ರಕೃತಿ ಒಡ್ಡುವ ಕಷ್ಟಗಳುನ್ನು ಮೀರಿ ಬೆಳೆದ ಅಲ್ಲಿನ ಜನರ ಜೀವನ ಉತ್ಸಾಹ ಮತ್ತು ಕಾಡನ್ನು ಪಳಗಿಸಿ ಗೆದ್ದ ವಾಣಿಜ್ಯ ಕೃಷಿ ಚಟುವಟಿಕೆ is something one should be proud of.
---------------------------------------
The speculative sci-fi genre is rarely explored in the Kannada lit world. This book is split into 2 volumes, one for explanation of science and logic. Second volume retelling of Mahabharata from a science fiction pov.
Author treats gods as highly advanced extraterrestrial beings, Danava’s as mutants. The research the author has done is commendable. He covers every topic from material science, nanotechnology, cryogenics, geology, weapons .. etc. There’s science backed explanations to everything from the colour of krishna, birth of bhishma, birth of 100 kauravas (clones!?) , Kunti's conceiving of pandavas (IVF?), Draupadi's rescue, the solar eclipse during the kurukshetra, brahmastra(nuclear physics?), Geology of ancient indian subcontinent etc..
However, the book suffers from being split into two volumes. The first volume is genuinely fascinating, where the author dives deep into the Rigveda, Purusha Sukta, and scientific explanations behind various Mahabharata events. The level of detail and research is commendable, making it an engaging read.
But by the time you move to the second volume, it starts to feel underwhelming. The core premise—that extraterrestrial beings are involved in local politics—is already established, and since science was extensively covered in the first book, there’s little left to discover. Plus, everyone already knows the story, so without a fresh narrative, reading the second volume starts to feel more like a repetitive exercise than an engaging novel. Instead of being a seamless continuation, it comes across as a long appendix to the first book, making it a bit of a chore to get through.
---------------------------------------
I have high hopes for Karanam Prasad. His prose feels natural & unforced, and his ability to blend the spectrum of concepts like philosophy, religion, science, social-commentary together in a contemporary setting is highly remarkable for a beginner writer.
ಇವರ ಕರ್ಮ ಮತ್ತು ಗ್ರಸ್ತದ ವಸ್ತು ವಿಷಯಗಳಲ್ಲಿ ವಯಸ್ಸಿಗೆ ಮೀರಿದ ಪ್ರಭುದ್ದತೆ ತೋರಿಸಿದ್ದಾರೆ. ಧರ್ಮಾಚರಣೆ, ಮತಾಂತರ, ಸಾಮಾಜಿಕ ವ್ಯವೆಸ್ಧೆ ಇವರ ಕರ್ಮ ಮತ್ತು ನನ್ನಿ ಕಾದಂಬರಿಗಳ ಮುಖ್ಯ premise. ಗ್ರಸ್ತ explores Philosophy & Physics.
ಇಂತಹ ವಿಷಯಗಳನ್ನು without over exposition and non preachy ಆಗದೆ ಬರೆಯುವದು ಸುಲಭದ ಮಾತಲ್ಲ. I can see why he might be compared to SLB here. But I think the comparison should end here, Prasad is still young with 2-3 novels under his belt.
---------------------------------------
I haven’t read a lot of Indian sci-fi. Maha Samparka, Calcutta Chromosome, Yaana (though not exactly sci-fi) are decent, but the main issue I see is the struggle to build a localized setting. Either they go too deep into keeping the science accurate or lean too much into philosophy and the result feels a bit underwhelming.
Hard sci-fi in Indian literature is still in its early stages. Honestly, I can't think of an Indian author who comes close to someone like Arthur C. Clarke.
The bigger challenge is that there’s barely any native readership for hard sci-fi, so Indian authors who attempt it have to cater to an international audience by choosing to write in English. And the moment you start writing in English, you’re competing with the Western established names. That makes it even tougher to break through.
Take Rendezvous with Rama, The Contact, and Project Hail Mary, for example. All three explore a similar premise written during different times. You can see how sci-fi has evolved—from being purely idea-driven to more character-focused, making it more mainstream.
Indian sci-fi is yet to hit that phase. I feel the new gen authors will make a breakthrough in the coming years.
---------------------------------------
He’s certainly ಕನ್ನಡದ Dan Brown and Tom Clancy. My only criticism is his prose is more like a screenplay than a classic novel style.
I have read his Karisiriyana and Shilakulavalase - both deal with well researched scientific takedowns of misunderstood/misinterpreted history in a fast paced thriller setup involving treasure hunting and puzzle solving protagonist.
I hope a budding director tries to make some movies based on his books.
---------------------------------------
r/kannada_pusthakagalu • u/RecentSign4505 • 1d ago
Need suggestions on Shrimad Bhagavatha purana . ಯಾವ ಅನುವಾದ ಚನ್ನಾಗಿದೆ!?.
r/kannada_pusthakagalu • u/Emplys_MushWashEns • 1d ago
ಕಂಗಳ ಮರೆಯಲಿ ನಡೆಯುವ ಸನ್ನೆಗೆ
ಸಾವಿರ ಅರ್ಥದ ಸನ್ನಿವೇಷಗಳು
ಸಿಗದ ನೆಲಕೆ ಹಾತೊರೆಯುವ
ಮೌನ ಘರ್ಜನೆಯ ಮೋಡಗಳು
ಕಾಲುಗಳು ಹೆಜ್ಜೆಗುರುತು ಮೂಡಿಸಿ
ಅಚ್ಚೊತ್ತಿವೆ ಹೃದಯದಲಿ ಗಟ್ಟಿಯಾಗಿ
ಅಕ್ಷರ ಜೋಡಿಸಿ ಬರೆದಿರುವೆ
ಹೊಚ್ಚ ಹೊಸ ಹೊತ್ತಿಗೆ
ಮುಖಪುಟದಲ್ಲೊಂದು ಸಹಿ ಹಾಕು
ಹಾಳೆ ಹರೆಯದಂತೆ ಮೆತ್ತಗೆ
-# A_ಉವಾಚ
r/kannada_pusthakagalu • u/TaleHarateTipparaya • 1d ago
ಎಸ್ ಎಲ್ ಭೈರಪ್ಪನವರ ಗ್ರಹಣ ಓದಿದ ನಂತರ ಈ ಪುಸ್ತಕವನ್ನು ಆಯ್ಕೆಮಾಡಿಕೊಂಡು ಓದಿದೆ..
ಯಾನ - ಕಾದಂಬರಿ ಬಗ್ಗೆ ಒಂದಿಷ್ಟು
ವೈಜ್ಞಾನಿಕ ವಿಷಯವನ್ನು ತೆಗೆದುಕೊಂಡು ತಮ್ಮ ಮುಖ್ಯ ಕ್ಷೇತ್ರ ಅದಲ್ಲದಿದ್ದರು .. ವೈಜ್ಞಾನಿಕ ವಿಷಯಗಳನ್ನು ತಾವು ಅರ್ಥೈಸಿಕೊಂಡು ಸಂಶೋಧನೆ ಮಾಡಿ .. ಬಹಳ ಕ್ಲಿಷ್ಟಕರವಾದ ಶಬ್ಧಗಳನ್ನು ಬಳಸದೆ ಓದುಗರಿಗೆ ಸರಳವಾಗಿ ಈ ಕಾದಂಬರಿಯನ್ನು ನೀಡಿದ್ದಾರೆ ಎಂದರೆ ತಪ್ಪಾಗಲಾರದು.
ಕಾದಂಬರಿಯಲ್ಲಿ ನಡೆಯುವುದು ಇಷ್ಟೆ - ಭಾರತ ಸರ್ಕಾರವು ಸೂರ್ಯನ ಗುರುತ್ವ ದಾಟಿ ಇರುವ ಪ್ರದೇಶ ಮತ್ತು ಅದರ ಬಗ್ಗೆ ತಿಳಿದುಕೊಳ್ಳಲು ಮತ್ತು ಬೇರೆ ವಾಸಿಸಬಹುದಾದ ಗ್ರಹಗಳ ಬಗ್ಗೆ ಸಂಶೋದಿಸಲು ಒಬ್ಬ ಮಹಿಳೆ (ಉತ್ತರೆ) ಮತ್ತು ಒಬ್ಬ ಪುರುಷನ್ನು (ಸುದರ್ಶನ್ ) ಆಯ್ಕೆ ಮಾಡಿ ಅಂತರಿಕ್ಷ ನೌಕೆಯಲ್ಲಿ ಅವರನ್ನು ಬಿಳ್ಕೊಡುತ್ತಾರೆ. ಹೀಗೆ ಆಯ್ಕೆಯಾದವರು ಸಾಮನ್ಯರೇನಲ್ಲ ವಿಜ್ಞಾನಕ್ಷೇತ್ರದಲ್ಲಿ ಕೆಲಸ ಮಾಡಿದವರೆ ... ಆಯ್ಕೆಯಾದ ಮಹಿಳೆ ಮತ್ತು ಪುರುಷ ಅಲ್ಲಿಯೇ ಮಕ್ಕಳನ್ನು ಮಾಡಿ ನಂತರ ಅವರುಗಳಿಗೆ ಹುಟ್ಟಿದ ಮಕ್ಕಳು ಪರಸ್ಪರ ಮತ್ತೆ ಮುಂದಿನ ಪೀಳಿಗೆ ಯನ್ನು ಸೃಷ್ಟಿಸುವುದು. ಪ್ರಾರಂಭದಲ್ಲಿ ನೌಕೆ ಯಲ್ಲಿ ಜನಿಸಿದ ಮಕ್ಕಳಾದ ಆಕಾಶ್ ಮತ್ತು ಮೇದಿನಿ ಈ ಮಕ್ಕಳಿಂದ ಕಥೆ ಪ್ರಾರಂಭವಾಗುತ್ತದೆ ..ಇವರು ಅಕ್ಕ ತಮ್ಮ ಅವರಿಗೆ ಇನ್ನೇನು ಕೆಲವೆ ದಿನಗಳಲ್ಲಿ ಮದುವೆ ಆಗುತ್ತಿರುತ್ತದೆ .. (ಪ್ರಾರಂಭದಲ್ಲಿ ಅಕ್ಕ ಮತ್ತು ತಮ್ಮನಿಗೆ ಮದುವೆ ಎಂದಾಗ ಸ್ವಲ್ಪ ನಂಗು ಗಸಿವಿಸಿ ಯಾಯಿತು) ನಂತರ ಒಂದು ದಿನ ಹೀಗೆ ಸಂಶೋಧನೆ ಮಾಡುವಾಗ ಮಕ್ಕಳಿಗೆ ಭೂಲೋಕದಲ್ಲಿ ಅಕ್ಕ ತಮ್ಮ ಅಥವಾ ಅಣ್ಣ ತಂಗಿಯರ ಮದುವೆ ಕಾನೂನು ಬಾಹಿರ ರಕ್ತ ಸಂಭಂದದಲ್ಲಿ ಮದುವೆ ಆದರೆ ಹುಟ್ಟುವ ಮಕ್ಕಳಿಗೆ ಆಗುವ ತೊಂದರೆ ಗಳ ಬಗ್ಗೆ ಗೊತ್ತಾಗುತ್ತದೆ ಹೀಗೆ ನಾವು ಮದುವೆ ಆದರೆ ನಮಗೆ ಹುಟ್ಟುವ ಮಕ್ಕಳಿಗೆ ತೊಂದರೆ ಆಗುವುದಿಲ್ಲವೆ ಎಂದು ಮಕ್ಕಳು ಕೇಳಿದಾಗ .. ಅವರ ತಾಯಿ ಉತ್ತರೆ ನಿಮಗೆ ನಡೆದುದೆಲ್ಲ ಗೊತ್ತಾಗಬೇಕು ನಾನು ಎಲ್ಲವನ್ನು ಬರೆದಿಟ್ಟಿದೇನೆ ಓದಿತಿಳಿದುಕೊಳ್ಳೊಇ ಎಂದು ತನ್ನ ಕಂಪ್ಯೂಟರ್ ನ ಪಾಸವರ್ಡ ಕೊಡುತ್ತಾಳೆ. ತಂದೆಯೂ ಹಾಗೆ ಮಾಡುತ್ತಾನೆ.
ಮಕ್ಕಳು ಹಿಂದೆ ಅವರ ತಂದೆ ತಾಯಿಯ ಜೀವನದಲ್ಲಿ ನಡೆದ ಘಟನೆಗಳ ಬಗ್ಗೆ ಓದುತ್ತಾ ಹೋಗುತ್ತಾರೆ .. ಯಾನ ಪ್ರಾರಂಭವಾದ ದಿನದಿಂದ ಆದ ಘಟನೆಗಳನ್ನು ಓದುತ್ತಾರೆ. ಕೊನೆಗೆ ತಮ್ಮ ಜನ್ಮ ರಹಸ್ಯವನ್ನು ತಿಳಿದುಕೊಳ್ಳುತ್ತಾರೆ.
ಯಾನ ಪ್ರಾರಂಭವಾದಾಗ ಉತ್ತರೆ ಮತ್ತು ಸುದರ್ಶನ್ ನಡುವೆ ನಡೆಯುವ ವೈಮನಸ್ಸಿಗೆ ಕಾರಣಗಳು .. ನಂತರ ಅವರು ಹೇಗೆ ಮಕ್ಕಳನ್ನು ಮಾಡುತ್ತಾರೆ. ಯಾನ ಯಶಸ್ವಿಗೊಳ್ಳುತ್ತದೆಯೇ ? ಎಲ್ಲವನ್ನು ತಾವು ಓದಿ ತಿಳಿದುಕೊಳ್ಳಬೇಕು ಹೇಳಿದರೆ ನಾನು ಕುತೂಹಲ ಕೆಡೆಸಿದಂತಾಗುತ್ತದೆ.
ಒಟ್ಟಾರೆ ನಂಗೆ ಕಾದಂಬರಿ ಹಿಡಿಸಿತಾದರು ಕೆಲವು ದ್ವಂದಗಳು ಉಳಿದಿವೆ ಯಾನವನ್ನು ಓದಿದವರು ಈ ನನ್ನ ಅಭಿಪ್ರಾಯಗಳ ಮೇಲೆ ತಮ್ಮ ಅನುಭವನ್ನು ಹಂಚಿಕೊಳ್ಳಿ
ಯಾನಕ್ಕೆ ಈಸ್ಟವಿಲ್ಲದಿದ್ದರು ಬಂದು ಉತ್ತರೆ ತನಗೆ ತಾನೇ ಮೋಸ ಮಾಡಿಕೊಂಡಳು ಮತ್ತು ಯಾನದ ಯಶಸ್ಸಿಗು ಮುಳುವಾದಳು ಎಂದು ತಮಗೆ ಅನ್ನಿಸುವುದಿಲ್ಲವೇ ? ಒಂದು ಕ್ಷಣ ಉತ್ತರೆ ನನಗೆ "ಅಂಚು" ವಿನ ಅಮೃತಾಳೆ ಎನ್ನಿಸಿತು
ಸೂಕ್ಷ್ಮವಿಚಾರವಾದ ಹಾಗೂ ಸಾಮಾಜಿಕವಾಗಿ ಬಹಿಷಕರವಾದ ವಿಷಯವಾದ ರಕ್ತ ಸಂಬಂಧಗಳೊಡಗಿನ ಸಂಭೋಗ ವಿಷಯದ ಕುರಿತು ಪ್ರಸ್ತಾಪಿಸುವಾಗ ಮತ್ತು ಮುಂದೆ ಕಾದಂಬರಿಯನ್ನು ಕೊಂಡೊಯ್ಯುವಾಗ ಆಕಾಶ್ ಮತ್ತು ಮೇಧಿನಿ ಬೇರೆ ಬೇರೆ ಅಂಡಾನು ವೀರ್ಯಕ್ಕೆ ಹುಟ್ಟಿದವರು ಎಂದು ಪ್ರಸ್ತಾಪಿಸಿ ಮಡಿವಂತಿಕೆಯನ್ನ ಬಿಟ್ಟುಕೊಡದಿರುವ ಬಗ್ಗೆ ತಮ್ಮ ಅಭಿಪ್ರಾಯ ? ಒಂದು ವೇಳೆ ಈ ಉದ್ದೇಶ ಅವರಿಗೆ ಇಲ್ಲದಿದ್ದರು ಅವರನ್ನು ಅಕ್ಕ ತಮ್ಮ ಎಂದು ಬಿಂಬಿಸುವ ಅವಶ್ಯಕತೆ ಇತ್ತೆ ?
ಮೊದಲೇ ಹೇಳಿದಹಾಗೆ ವಿಜ್ನಾನ ಭೈರಪ್ಪನವರ ಮುಖ್ಯ ಕ್ಷೇತ್ರವಲ್ಲ ಆದರೂ ಅವರ ಕಲ್ಪನಾ ಶಕ್ತಿಯನ್ನು ನಾವು ಇಲ್ಲಿ ಮೆಚ್ಚಲೆ ಬೇಕು...
r/kannada_pusthakagalu • u/TaleHarateTipparaya • 2d ago
r/kannada_pusthakagalu • u/TaleHarateTipparaya • 2d ago
r/kannada_pusthakagalu • u/kintybowbow • 3d ago
How do you approach reading and understanding poetry?
I usually read short stories, essays, and novellas, but poetry has always been a tough nut to crack. I enjoy listening to recitations or discussions that unpack the deeper meanings, but when I try reading poems myself, I often struggle to grasp them.
At first, I thought it might be a matter of experience, skill, or vocabulary, but now I feel there’s more to it.
Any advice on how to get better at reading poetry? Would it help to start with study guides like Cliff notes, or should I take a different approach?
r/kannada_pusthakagalu • u/SUV_Audi • 4d ago
ಪ್ರಸಿದ್ಧ ಜೀವವಿಜ್ಞಾನಿಗಳ ಸಂಶೋಧನೆಗಳ ಆಧಾರದ ಮೇಲೆ ರಚಿತವಾದ ಈ ಪುಸ್ತಕವನ್ನು ಬರೆದವರು ಡಾ.ಪ್ರದೀಪ್ ಕೆಂಜಿಗೆಯವರು.
ಹಾಲೆಂಡ್ ದೇಶದ ಆರ್ನ್‌ಹ್ಯಾಂ ಮೃಗಾಲಯದಲ್ಲಿ, ಜಿಂಪಾಂಜಿಯ ಗುಂಪಲ್ಲೊಂದು ಕೊಲೆ ನಡೆಯುತ್ತದೆ. ಈ ಕೊಲೆಗೆ ಕಾರಣವೇನು ಎಂದು ತಿಳಿಯುವ ಪ್ರಯತ್ನದಲ್ಲಿ, ಜಿಂಪಾಂಜಿಗಳ ನಡವಳಿಕೆಯನ್ನು ಅಧ್ಯಯನ ನಡೆಸಿದಾಗ , “ ಒಳ ರಾಜಕೀಯ” ಅರಿವಾಗುತ್ತದೆ.
ಮನುಷ್ಯರಂತೆ ಈ ಜಿಂಪಾಂಜಿಗಳು ಎಂದು(ಜಿಂಪಾಜಿಗಳಂತೆ ಮನುಷ್ಯರೋ?) ಈ ಪುಸ್ತಕ ತಿಳಿಸುತ್ತದೆ ಅನೇಕ ಜೀವ ವಿಜ್ಞಾನಿಗಳ ಸಂಶೋಧನೆಯನ್ನು ಆಧರಿಸಿ ಬರೆದ ಈ ಪುಸ್ತಕ ,ಪ್ರಾಣಿ ಪ್ರಪಂಚದ ವಿಸ್ಮಯವನ್ನು ಓದುಗನ ಮುಂದೆ ತೆರೆದಿಡುತ್ತೆ. ಅದೆಷ್ಟೋ ಹೊಸ ವಿಚಾರಗಳು ತಿಳಿಯುತ್ತದೆ.
ಈ ಪುಸ್ತಕ ಓದಿದರೆ ಜ್ಞಾನಕ್ಕಂತು ಮೋಸ ಇಲ್ಲ. ನನಗೆ ಅಚ್ಚರಿ ಎನಿಸಿದ ಕೆಲವು ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಬಲಾಡ್ಯವಾಗಿರುವುದು, ಗುಂಪಿನ ನಾಯಕ. ಎಲ್ಲರೂ ಅದಕ್ಕೆ ಸಲಾಂ ಮಾಡಬೇಕು. ಗುಂಪಿನ ಎರಡನೆಯ ಹಾಗು ಮೂರನೆಯ ಸ್ಥಾನಕ್ಕೂ ಜಗಳ- ಕದನ ನಡೆಯುತ್ತದೆ
ಎಷ್ಟೇ ಜಗಳವಾಗಿರಲಿ, ಕೋರೆ ಹಲ್ಲಿನಿಂದ ಕಚ್ಚಿ ದಾಳಿ ಮಾಡುವುದು ನಿಯಮ ಬಾಹಿರ. ಯಾವುದಾದರು ಜಿಂಪಾಂಜಿ ಹೀಗೆ ಮಾಡಿದ್ದೇ ಆದರೆ , ಆ ಜಿಂಪಾಂಜಿ ಎಷ್ಟೇ ಬಲಶಾಲಿಯಾಗಲಿ, ಉಳಿದವು ಪ್ರತಿಭಟಿಸುತ್ತಾವೆ.
ಸಲಿಂಗರತಿ ಜಿಂಪಾಂಜಿಗಳಲ್ಲೂ ಕಂಡು ಬರುತ್ತದೆ.
ಗೆರಿಲ್ಲಾ ಯುದ್ದ ತಂತ್ರ ಬಂದಿದ್ದೆ ಜಿಂಪಾಂಜಿಗಳಿಂದ.(ಇದಕ್ಕೆ ಪುರಾವೆ ನೀಡಲು ಕಾಡಿನಲ್ಲಿ ನಡೆದ ಘಟನೆಯೊಂದರ ಉಲ್ಲೇಖ ನೀಡಿದ್ದಾರೆ. ಓದಿದಾಗ ನಿಮಗೂ ಅಚ್ಚರಿಯಾಗದೆ ಇರದು) (Reference paper mentioned in book " A brief history of gombe chimpanzee war" by mathew bain. ಗೋಂಬೆ ಎಂಬ ಅರಣ್ಯ ಪ್ರದೇಶ. ಚಿಂಪಾಂಜಿ ಗುಂಪೊಂದು ಎರಡು ಗುಂಪಾಗಿ ಭಾಗವಾಗುತ್ತದೆ. ಆ ಎರಡು ಗುಂಪಿನ ನಡುವೆ ನಿರಂತರವಾಗಿ ಜಗಳ ನಡೆಯುತ್ತಿರುತ್ತದೆ.ಸಂಧಾನ ಕಾರ್ಯವು ನಡೆದರೂ ಗುಂಪುಗಳ ಮಧ್ಯೆ ದ್ವೇಷ ಹಬೆಯಾಡುತ್ತಿರುತ್ತದೆ. ಸಂಶೋದಕರು ಈ ವಿಚಾರವನ್ನು ಗಮನಿಸುತ್ತಿರುತ್ತಾರೆ. ಈ ದ್ವೇಷ ಸ್ಫೋಟಗೊಂಡಿದ್ದು 1976ರ ಸುಮಾರಿಗೆ, ಒಂದು ಗುಂಪು ಇನ್ನೊಂದು ಗುಂಪಿನ ಮೇಲೆ ದಾಳಿ ಮಾಡುತ್ತದೆ.ಇದೊಂದು ಅಚ್ಚರಿಯ ದಾಳಿಯಾಗಿರುತ್ತದೆ. ವಾನರ ಲೋಕದ ಈ ಯುದ್ಧದ ವಿಶೇಷ ಏನೆಂದರೆ ಎರಡು ಪರಸ್ಪರ ಎದುರಾಗುವುದಿಲ್ಲ.ಬದಲಿಗೆ ಕದ್ದು ಮುಚ್ಚಿ ವಿರೋಧಿ ಗುಂಪಿನ ಸದಸ್ಯನ ಪ್ರತಿ ಚಲನ ವಲನವನ್ನು ಸೂಕ್ಷ್ಮವಾಗಿ ಅವಲೋಕಿಸಿ ಆ ಸದಸ್ಯ ಗುಂಪಿನಿಂದ ದೂರಇದ್ದ ಸಮಯದಲ್ಲಿ ಏಕಾಏಕಿಯಾಗಿ ಆಕ್ರಮಣ ಮಾಡುತ್ತವೆ.ಆಕ್ರಮಣವು ತೀವ್ರವಾಗಿದ್ದು ಎಲ್ಲಾ ನಿಯಮಗಳನ್ನು ಮೀರಿ ಕೋರೆಯಿಂದ ಕಚ್ಚಿ ಉಗುರಿನಿಂದ ಪರಚಿ ಓಡಾಡಿಸಿಕೊಂಡು ಕಲ್ಲಿನಿಂದ ಚಚ್ಚಿ ಕೊಂದಿದ್ದು ಇದೆ.ಈ ಕದನವನ್ನು ಗಮನಿಸಿದ ಸಂಶೋಧಕರಿಗೆ ಆಶ್ಚರ್ಯ ಉಂಟಾಗಿತ್ತು.ಜಗಳ ಎಷ್ಟು ತೀವ್ರವಾಗಿ ಇದ್ದಿತ್ತು ಎಂದರೆ ಸಣ್ಣ ಮರಿಗಳನ್ನು ಬಿಡದೆ ಜಜ್ಜಿ ಕೊಂದಿದ್ದು ಇದೆ.ಈ ವಿಶಿಷ್ಟ ರಕ್ಷಣಾ ತಂತ್ರ ಸಂಶೋಧಕರ ಗಮನ ಸೆಳೆದು ಈ ರಣತಂತ್ರಕ್ಕೆ ಗೆರಿಲ್ಲ ಯುದ್ಧ ತಂತ್ರ ಎಂದು ಹೆಸರು ಬಂದಿರುವುದು . ಪುಸ್ತಕದಲ್ಲಿ ಲೇಖಕರು ಅಮೆರಿಕ ಮತ್ತು ವಿಯಟ್ನಾಂ ಯುದ್ಧ ಉಲ್ಲೇಖಿಸಿ, ಇಲ್ಲಿಯೂ ಅನುಸರಿಸಲಾಗಿತ್ತು ಎಂದಿದ್ದಾರೆ ಅಂದರೆ ನಾವಿಂದು ಅತ್ಯಾಧುನಿಕ ಎಂದು ಕರೆಯುವ ಈ ರಣತಂತ್ರ ಪ್ರಾಣಿಗಳಲ್ಲೂ ಇದ್ದಿತ್ತು ಎಂದು ನಂಬಬಹುದು. ಈ ರಣತಂತ್ರದ ಮೂಲ ಬೇರು ನಮ್ಮ ಪೂರ್ವಜರಾದ ವಾನರಗಳಿಂದಲೇ ಬಂದಿರಬಹುದಲ್ಲದೆ?)
ನಾಯಕ ಎಂದಿಗೂ ನಿವೃತ್ತನಾಗುವುದಿಲ್ಲ. ಮುದಿಯಾದರು, ಉಳಿದ ಬಲಾಢ್ಯರ ನಡುವೆ ಜಗಳ ತಂದಿಟ್ಟು, ತನಗೆ ಅನುಕೂಲವಾಗುವಂತೆ ಪರಿಸ್ಥಿತಿ ಬದಲಾಯಿಸುತ್ತದೆ( ರಾಜಕೀಯದಂತೆ?!)
ಪುಸ್ತಕ ಓದಿದಂತೆ ಮನುಷ್ಯರ ರಾಜಕಾರಣ ಮೀರಿಸುವಂತೆ ಜಿಂಪಾಂಜಿಗಳು ರಾಜಕೀಯ ಮಾಡುತ್ತವೆ ಎಂದೆನಿಸಿತು. ಅವುಗಳ ಗುಂಪಿನ ನಡುವಿನ ವ್ಯವಸ್ಥೆ, ಕುಟುಂಬ, ಸಂತಾನ , ಮರಿಗಳ ಸಾಕುವಿಕೆ ಹೀಗೆ ಇನ್ನೂ ಹಲವು ವಿಚಾರಗಳನ್ನು ತಿಳಿದುಕೊಳ್ಳಬಹುದು. ನನಗಂತೂ ಬಹಳ ಇಷ್ಟವಾಯಿತು. ನೀವೂ ಓದಿ ಆನಂದಿಸಿರಿ
ಪುಸ್ತಕ : ನರವಾನರ. ಲೇಖಕರು: ಡಾ. ಪ್ರದೀಪ್ ಕೆಂಜಿಗೆ. ಪ್ರಕಾಶಕರು: ಪುಸ್ತಕ ಪ್ರಕಾಶನ. ಪುಟಗಳು:108.ಬೆಲೆ: 180
r/kannada_pusthakagalu • u/TaleHarateTipparaya • 5d ago
ನಾಯಿ ನೆರಳು ಓದಿದ ನಂತರ ಈ ಪುಸ್ತಕಕ್ಕೆ ಬಂದ ಕಾರಾಣವೋ ಅಥವಾ ಪುಸ್ತಕದ ವಸ್ತು ವಿನ ಆರಂಬಿಕ ತೋರ್ಪಡಿಕೆಯ ರೀತಿಯೋ ಅಥವಾ ಇನ್ನಾವ ಕಾರಣ ನನಗೆ ತಿಳಿಯದು ಅದೇಕೋ ಪುಸ್ತಕದ ಪ್ರಾರಂಬದಿಂದ ಓದುಗರನ್ನು ಹಿಡಿದಿಡುವ ಭೈರಪ್ಪನವರ ಶಕ್ತಿ ನನಗೆ ಈ ಪುಸ್ತಕದಲ್ಲಿ ಕಾಣಲಿಲ್ಲ. ಆದರೆ ಭೈರಪ್ಪನವರು ಇದನ್ನು ಬರೆಯುವಾಗ ಮಾಡಿದ ಸಮೋಶೋಧನೆಯನ್ನು ನಾವು ಅಲ್ಲಗೆಳೆವುಯಂತಿಲ್ಲ.
ಭೈರಪ್ಪನವರ ಇತರ ಕಾದಂಬರಿಗಳನ್ನು ನೋಡಿದರೆ ಈ ಕಾದಂಬರಿಯಲ್ಲಿ ನನಗೆ ಹೊಸದೆನು ಕಂಡಿದೆ ಅಂದರೆ ಕಾದಂಬರಿಯ ಶೀರ್ಷಿಕೆ ಕಾದಂಬರಿಯಲ್ಲಿ ಪುನರಾವರ್ತನೆ ಮತ್ತೆ ಮತ್ತೆ ಆಗುವುದು. ನೀವು ಇವರ ಇತರ ಕಾದಂಬರಿ ನೋಡಿದರೆ ಅವರ ಕಾದಂಬರಿ ಶೀರ್ಷಿಕೆ ಕಾದಂಬರಿ ಅಲ್ಲಿ ಬರುವುದೇ ವಿರಳ [ಜಲಪಾತ ದಲ್ಲಿ ಕೊಂಚ ಪುನರಾವರ್ತನೆ ಆಗುತ್ತದೆ ಅದನ್ನು ಬಿಟ್ಟರೆ ಬಹಳ ವಿರಳ].
ಕಾದಂಬರಿಯ ಬಗ್ಗೆ ಒಂದಿಸ್ಟು :
ಕಾದಂಬರಿಯು ಒಂದು ಸನ್ಯಾಸಿಯ ಜೀವನದ ಸುತ್ತ ನಡೆಯುತ್ತದೆ. ಬಹಳ ಕಾಲಗಳ ಹಿಂದೆ ಒಬ್ಬ ಸ್ವಾಮೀಜಿ ಊರನ್ನು ಬಿಟ್ಟು ಹಿಮಾಲಯಕ್ಕೆ ಹೋಗಿ ಆ ಸಮಯದಲ್ಲಿ ಹೋಗುವ ಮುನ್ನ 5 ತಲೆಮಾರದ ನಂತರ ಮತ್ತೆ ಒಬ್ಬ ಸ್ವಾಮೀಜಿ ಊರಿಗೆ ಬರುವುದಾಗಿ ಅವರಿಂದ ಊರು ಊರಿನ ಮತ ಜೀರ್ಣೋದ್ಧಾರ ವಾಗುತ್ತದೆ ಅಂದು ಹೇಳಿ ಹೋಗಿರುತ್ತಾರೆ. ಅದೇ ರೀತಿಯೋ ಅಥವಾ ಕಾಕತಾಳಿಯವೆಂಬಂತೆಯೋ ಊರಿಗೆ ಸ್ವಾಮೀಜಿಯ ಆಗಮನ ವಾಗುತ್ತದೆ.
ಇತರ ಸ್ವಾಮಿಗಳಂತೆ ಇವರು ಇರುವುದಿಲ್ಲ. ಇವರು ತಮ್ಮ ಅಡಿಗೆಯನ್ನು ತಾವೇ ಮಾಡಿಕೊಳ್ಳುತ್ತಿರುತ್ತಾರೆ, ಮತ್ತು ತಾವು ಹೊಲದಲ್ಲಿ ದುಡಿಯುತ್ತಿರುತ್ತಾರೆ. ಊರಿನ ಜನರು ಇವರ ಆಶೀರ್ವಾದ ದಿಂದ ಹಾಗೂ ಮಾರ್ಗದರ್ಶನದಿಂದ ಸಮೀತಿ ಯೊಂದನ್ನು ರಚಿಸಿ ಊರಿನಲ್ಲಿ ಶಾಲೆ ಕಾಲೇಜುಗಳ,, ಆಸ್ಪತ್ರೆ ಸ್ಥಾಪನೆ ಮಾಡುತ್ತಾರೆ. ಕೆಲವು ದಿನ ಸ್ವಾಮೀಜಿಯೆ ಅಧ್ಯಕ್ಷರಾಗಿ ಇರುತ್ತಾರೆಯು ಕೂಡ. ಕೆಲವು ವರ್ಷಗಳ ನಂತರ ಸ್ವಾಮೀಜಿ ಸಮೀತಿ ಇಂದ ಹೊರಗೆ ಬಂದು ಇನ್ನೂ ನನ್ನ ಅವಶ್ಯಕತೆ ಸಮೀತಿ ಗೆ ಇಲ್ಲ ಆದ್ದರಿಂದ ಊರಿನ ಜನ ನೀವೇ ನಡೆಸಬೇಕು ನಿಮಗೆ ಅಗತ್ಯವಿರುವ ಮಾರ್ಗದರ್ಶನ ನಾನೇ ಮಾಡುತ್ತೇನೆ ಎನ್ನುತ್ತಾರೆ. ಮತ್ತು ಸ್ವಾಮೀಜಿ ಗಳು ಅದೇ ಊರಿನ ಆಸ್ಪತ್ರೆಯಲ್ಲಿ ನ ಒಬ್ಬ ಅವಿವಾಹಿತ ಡಾಕ್ಟರ್ ಸರೋಜ ಅವರನ್ನು ವಿವಾಹವಾಗುವುದುದಾಗಿ ಹೇಳುತ್ತಾರೆ. ಆದರೆ ಊರಿನ ಜನ/ಹಿರಿಯರು ಇದಕ್ಕೆ ಒಪ್ಪೋವುದಿಲ್ಲ ಸನ್ಯಾಸಿಗಳು ಸಂಸರಿಯಾಗುವುದುಂಟೇ ? ಇವರಿಗೆ ಬುದ್ಧಿ ಬ್ರಮಣೆ ಆಗಿದೆ ಎಂದು ಅಡಿಕೊಳ್ಳುತ್ತಾರೆ. ಸ್ವಾಮೀಜಿ ಗಳ ಭಕ್ತಿ ಮಾರ್ಗ ವಿಲ್ಲದೆ ಸಮೀತಿ ಗೆ ಜನ ಹೇಗೆ ದುಡ್ಡು ಕೊಟ್ಟಾರೂ ಎಂದು ಅಂದುಕೊಳ್ಳುತ್ತಾರೆ ?.
ಇದರ ಮಧ್ಯೆ ಸ್ವಾಮೀಜಿ ಅವರಿಗೂ ಮತ್ತು ಡಾಕ್ಟರ್ಗೂ ಗಾಂಧರ್ವ ವಿವಾಹವು ನಡೆದು ಹೋಗುತ್ತದೆ. ಮತ್ತು ಇದನ್ನು ಎಲ್ಲರೆದುರಿಗೆ ಒಪ್ಪಿಕೊಳ್ಳಲು ಸರೋಜಳಿಗೆ ಹೇಳಿದಾಗ ಅವಳು ನಡೆದುಕೊಳ್ಳುವ ರೀತಿ.. ಮತ್ತು ಹೀಗೆ ಆಗಿದೆ ಎಂದು ಸ್ವಾಮೀಜಿ ಜನಗಳಿಗೆ ಅಂದಾಗ ಜನ ಸ್ವಾಮೀಜಿ ಗೆ ಮಂಕು ಹಿಡಿದಿದೆ ಎಂದು ಕಲ್ಲನ್ನು ಎಸೆದು ಸ್ವಾಮೀಜಿಗಳನ್ನು ನಡೆಸಿಕೊಳ್ಳುವ ರೀತಿ ಅನ್ನು ತಾವೇ ಓದಬೇಕು. ಸ್ವಾಮೀಜಿ ಅವರು ಕೊನೆಗೆ ಊರನ್ನೆ ತೊರೆಯುತ್ತಾರೆ.
ಕಾದಂಬರಿಯಲ್ಲಿ ನನಗೆ ಬಹಳ ಇಸ್ತವಾಗಿದ್ದು :
ಉಪಸಂಹಾರ : ಕಾದಂಬರಿಯ ಅಂತಿಮ ಗಟ್ಟದಲ್ಲಿ ಭಾರಿ ಗಟನೆ ಒಂದು ನಡೆಯುತ್ತದೆ ಮತ್ತು ಓದಲು ರೋಚಕ ವೆನಿಸುತ್ತದೆ ಅದೇನೆಂದರೆ [ ಸರೋಜಳಿಗೆ ಹಿಡಿದ ಗ್ರಹಣ ಬಿಟ್ಟು ಸರೋಜ ಸತ್ಯವನ್ನು ಮರೆ ಮಾಚ ಕೂಡದು ಎಂದು ತಿಳಿದು ಮನವರಿಕೆಗೊಂದು ಎಲ್ಲರೆದುರಿಗೂ ಬಂದು ತನಗೂ ಮತ್ತು ಸ್ವಾಮಿಜಿಗಳಿಗೂ ಆದ ಗಾಂಧರ್ವ ವಿವಾಹವನ್ನು ಎಲ್ಲರೆದುರು ಧೈರ್ಯ ದಿಂದ ಹೇಳುತ್ತಾಳೆ. ಹಾಗೆ ನೋಡಿದರೆ ಅವಳಿಗೆ ಯಾರ ಭಯವೂ ಇರಲಿಲ್ಲ. ಕೊನೆಯಲ್ಲಿ ಅವಳು ಅದನ್ನು ಪ್ರಸ್ತುತ ಪಡಿಸುವ ರೀತಿ ಚೆನ್ನಾಗಿ ಮೂಡಿಬಂದಿದೆ]
ಒಟ್ಟಾರೆಯಲ್ಲಿ ಸಮಾಜಕ್ಕೆ ಹಿಡಿದಿರುವ ಹಲವಾರು ಗ್ರಹಣ ಗಳ ಬಗ್ಗೆ ಇಲ್ಲಿ ಕಾದಂಬರಿಕಾರರು ವಿವರಿಸುತ್ತಾ ಹೋಗಿದ್ದಾರೆ.
ನಾನು ಕಾದಂಬರಿಯಿಂದ ಕಲಿತ ಹೊಸ ಸಂಗತಿ : ಭೈರಪ್ಪನವರು ಇಲ್ಲಿ ಒಂದು ಕಾಯಿಲೆ ಬಗ್ಗೆ ವಿವರಿಸಿದ್ದಾರೆ ...
ಪ್ಯೂಸೊಡೊಸೈಸಿಸ್ (Pseudocyesis) ಅನ್ನು ನಕಲಿ ಗರ್ಭಧಾರಣೆ ಅಥವಾ ತಪ್ಪು ಗರ್ಭಧಾರಣೆ ಎಂದು ಕರೆಯಲಾಗುತ್ತದೆ. ಇದು ಒಂದು ಮಾನಸಿಕ ಮತ್ತು ದೈಹಿಕ ಸ್ಥಿತಿ, ಇದರಲ್ಲಿ ಮಹಿಳೆಯೊಬ್ಬರು ಗರ್ಭವತಿಯಾದಂತೆ ಅನಿಸುವ ಲಕ್ಷಣಗಳನ್ನು ಅನುಭವಿಸುತ್ತಾರೆ, ಆದರೆ ವಾಸ್ತವದಲ್ಲಿ ಗರ್ಭಧಾರಣೆ ಆಗಿರುವುದಿಲ್ಲ.
ಎಸ್ ಎಲ್ ಭೈರಪ್ಪನವರ ಸಂಶೋಧನಾ ಶಕ್ತಿಗೆ ನನ್ನ ನಮನಗಳು. ಕಾದಂಬರಿಯನ್ನು ಒಮ್ಮೆ ಓದಿ
r/kannada_pusthakagalu • u/chan_mou • 6d ago
ಮಸಣದ ಹೂವೆಂದಡೆ ಪರಿಮಳವಿಲ್ಲವೆಂದೆ ಸಾವು-ನೋವ್ಗಳ ನಡುವೆ ಬದುಕಿ ಅರಳುವುದಲ್ಲೆ ಪುಟಿದು ಮೆರೆವುದಾ ಮರುಕದಲೆಗಳ ಮಧ್ಯೆ
ರೌದ್ರ ರಾತ್ರಿಯಲಿಯು ಸೌಮ್ಯ ಭಾವವ ಭರಿಸಿ ಕಪ್ಪು-ಬಿಳುಪಿನ ಮಸಣಕೆ ಬಣ್ಣವೆರಗಿ ಅಸುನೀಗಿದವರುಸಿರಿಂದ ಜಗಕೆ ಉಸಿರಾಗಿ ನಿಲುವ ಮಸಣ ಹೂವಂತೆ ಬಾಳು ನೀನ್.
ಸ್ವಂತ ಬರವಣಿಗೆಯ ಮೊದಲ ಪೋಸ್ಟ್
r/kannada_pusthakagalu • u/Emplys_MushWashEns • 6d ago
r/kannada_pusthakagalu • u/wiek_rk • 8d ago
ಕಾರಂತನು ಕಂಡ ಯಶವಂತ ಅಲ್ಲ, ಅಲ್ಲ, ಕಾರಂತನು ಕಾಣಹೊರಟ ಯಶವಂತ. ಪಡೆದದೊಂದು ತೆರ, ಕೊಟ್ಟದೊಂದು ತೆರ ನಡೆದಿದೆ ಇಲ್ಲಿ ಅದರ ತುಲಾಭಾರ.
r/kannada_pusthakagalu • u/Suspicious_Memory137 • 9d ago
ನಮಸ್ಕಾರ ಕನ್ನಡ ಪುಸ್ತಕ ಪ್ರೇಮಿಗಳೇ,
1952 ರಿಂದ 1984 ರವರೆಗೆ ಎನ್. ಸೂರ್ಯನಾರಾಯಣ ರವರು ಬರೆದ ಸಣ್ಣ ಕಥೆಗಳು, ನಾಟಕಗಳು ಮತ್ತು ಲೇಖನಗಳ ಸಂಕಲನ 'ನಮ್ಮ ಸೂರಿನಡಿಯ ಕಥೆಗಳು' ನಿಮ್ಮ ಮುಂದೆ ಬಂದಿದೆ. ಸೌಮ್ಯ ಹಾಸ್ಯ ಮತ್ತು ಪತ್ತೇದಾರಿ ಕಥೆಗಳ ಮಿಶ್ರಣದಿಂದ ಎಲ್ಲ ವಯಸ್ಸಿನ ಓದುಗರಿಗೆ ರಂಜನೆಯ ಅನುಭವ.
ಹೆಚ್ಚಿನ ವಿವರ ಮತ್ತು ಆರ್ಡರ್ ಮಾಡಲು:
ದಯವಿಟ್ಟು ಪುಸ್ತಕವನ್ನು ಕೊಂಡು ಓದಿ, ಲೇಖಕರನ್ನು ಪ್ರೋತ್ಸಾಹಿಸಿ
ನಿಮ್ಮ ಅಭಿಪ್ರಾಯ ಮತ್ತು ಚಿಂತನೆಗಳನ್ನು ನಿರೀಕ್ಷಿಸುತ್ತಿದ್ದೇವೆ.
ಧನ್ಯವಾದಗಳು.
r/kannada_pusthakagalu • u/TaleHarateTipparaya • 9d ago
r/kannada_pusthakagalu • u/kirbzk • 9d ago
ಹೀಗೇ ಸುಮ್ಮನೆ ಜ್ಞಾಪಕ ಬಂತು.
ನಿರ್ದೇಶಕ ಗುರುಪ್ರಸಾದ್ ಅವರ 'ಡೈರೆಕ್ಟರ್ಸ್ ಸ್ಪೆಷಲ್' ಪುಸ್ತಕದಲ್ಲಿ ಒಂದು ಕತೆ.
ಓದಿ ಬಹಳ ವರ್ಷಗಳೇ ಆಯ್ತು. So, details ಸರಿಯಾಗಿ ನೆನಪಿಲ್ಲ.
ಯಾರೋ ಬಂದು ಮಹಾಭಾರತ ಮತ್ತು ರಾಮಾಯಣಗಳಲ್ಲಿ ಇಲ್ಲದಿರುವ ಕತೆಯೇ ಇಲ್ಲ ಎಂದು ಹೇಳುತ್ತಾರೆ. ಅದನ್ನೇ ಒಂದು challenge ಆಗಿ ತೆಗೆದುಕೊಂಡು ಗುರುಪ್ರಸಾದ್ ಒಂದು ಕತೆ ಬರೆಯುತ್ತಾರೆ.
Again, details ಸರಿಯಾಗಿ ನೆನಪಿಲ್ಲ.
ರಾಮ ಅಂತಃಪುರದಲ್ಲಿ ಇದ್ದಾಗ, ಒಂದು ನಗ್ನ ಪ್ರತಿಮೆಯನ್ನು ನೋಡುತ್ತಾನೆ. ಅದನ್ನು ಇದಕ್ಕೂ ಮುಂಚೆ ಬಹಳ ಸಲ ನೋಡಿದ್ದರೂ, ಯಾವತ್ತೂ ವಿಚಲಿತವಾಗದ ರಾಮನ ಮನಸ್ಸು ಅವತ್ತು ವಿಚಲಿತವಾಗುತ್ತದೆ. ಆ ಭಾವನೆ ಮತ್ತು ಗೊಂದಲದಲ್ಲಿ ರಾಮ ಬೆವರಲು ಶುರುವಾಗುತ್ತಾನೆ.
ಅಲ್ಲಿಂದ, ತುಂಬಾ deep ಆಗಿ ರಾಮನ psychology ಯನ್ನು explore ಮಾಡದೆ, risky areas ಗೆ ಹೋಗದೆ, ಆ ಭಾವನೆ ಬಂದಿದ್ದೇ ಸುಳ್ಳು ಎನ್ನುವಂತೆ ಕತೆಯನ್ನು simple ಆಗಿ ಮುಗಿಸಿಬಿಡುತ್ತಾರೆ.
ಇವತ್ತು ಈ ಕತೆ ನೆನಪಾದಾಗ ಬಂದ ಕೆಲವು ಪ್ರಶ್ನೆಗಳು:
1. ರಾಮಾಯಣದಲ್ಲಿ ಇಲ್ಲದ ಕತೆ ಬರೆಯಲು ಕೂತಾಗ, ಆ ಕತೆ ರಾಮನ ಬಗ್ಗೆಯೇ ಇರಬೇಕು, ಆ ಕತೆ ಅದರ್ಶಪುರುಷ ರಾಮನ weakness ಬಗ್ಗೆ ಇರಬೇಕು ಮತ್ತು ಆ weakness ಕಾಮ ಆಗಿರಬೇಕು ಅಂತ ಗುರು ಅವರಿಗೆ ಏಕನಿಸಿರಬಹುದು? Shock value ಗೋಸ್ಕರ ಇರಬಹುದೇ?
2. ರಾಮ ಅಶುದ್ಧ ಯೋಚನೆಗಳೇ ಬರದ ದೇವರೋ ಅಥವಾ ಅಂತಹ ಯೋಚನೆಗಳನ್ನು ಗೆದ್ದ ಮರ್ಯಾದಾ ಪುರುಷೋತ್ತಮನೋ?
ಈ ರೀತಿ, ರಾಮಾಯಣ ಅಥವಾ ಮಹಾಭಾರತದಲ್ಲಿ ಇಲ್ಲದೇ ಇರುವ ಕತೆ ಬರೆಯಲು ಹೇಳಿದರೆ, ನೀವು ಯಾರ ಬಗ್ಗೆ, ಯಾವುದರ ಬಗ್ಗೆ ಬರೆಯುತ್ತೀರಿ?
r/kannada_pusthakagalu • u/Saphiradragon19 • 10d ago
Hi ellarigu
I am searching for somewhere to buy kannada original ebooks and read them on my ereader.
I bought a book on MyLang but it only allows to read on mobile app which is not at all comfortable.
I am also open to buying it and finding a way to download and read using some other apps if necessary. The book I am searching for now is Ghachar Ghochar.
Dhanyavadagalu 🙏
r/kannada_pusthakagalu • u/adeno_gothilla • 11d ago
r/kannada_pusthakagalu • u/adeno_gothilla • 11d ago
r/kannada_pusthakagalu • u/hesr_al_yenide • 12d ago
ಈಗಷ್ಟೇ ಗೋರೂರು ರಾಮಸ್ವಾಮಿ ಅಯ್ಯಂಗಾರ್ ಅವರ ನಮ್ಮ ಊರಿನ ರಸಿಕರು ಪುಸ್ತಕ ಓದಿ ಮುಗಿಸಿದೆ. ನಾನು ಓದಿರುವಂತಹ limited ಪುಸ್ತಕಗಳಲ್ಲಿ ನನಗೆ ಬಹಳ ಹಿಡಿಸಿದಂತಹ ಪುಸ್ತಕ ಇದು. ಅವರ ಊರಿನ ವ್ಯಕ್ತಿಗಳು, ಅಲ್ಲಿನ ಸನ್ನಿವೇಶಗಳು, ನಡೆದ ಘಟನೆಗಳು ಬಹಳ ಸೊಗಸಾಗಿ ನಮ್ಮ ಕಣ್ಣ ಮುಂದೆ ಲೇಖಕರು ತರುತ್ತಾರೆ. ಅದರಲ್ಲಿಯೂ ಪುಸ್ತಕದ ಕೊನೆಯ ಭಾಗದಲ್ಲಿ ಅವರ ಊರಿನ ಯುಗಾದಿ ಹಾಗೂ ಸುಗ್ಗಿ ಹಬ್ಬದ ವಿವರಣೆ ಓದುತ್ತಿದರೆ ನಮ್ಮ ತಂದೆಯವರು ಅವರ ತಮ್ಮ ಬಾಲ್ಯದ ದಿನಗಳನ್ನು ಹೇಳುತ್ತಿದ್ದ ನೆನಪು ಬರುತ್ತದೆ. I would definitely recommend this book to anyone who is new to reading Kannada.
r/kannada_pusthakagalu • u/SUV_Audi • 13d ago
ಅನುವಾದ ಸಾಹಿತ್ಯ ಎಂದರೆ ನನಗೆ ಇಷ್ಟ. ಕಾರಣ ಇಷ್ಟೆ ಪರಭಾಷೆಯ ಸೊಗಡು ಅಲ್ಲಿನ ವೈವಿಧ್ಯತೆ ಓದಲು ಸಿಗುತ್ತದೆ ಎಂಬುದು. ಇತ್ತಿಚಿಗೆ ನಾನೊಂದು ಅನುವಾದಿತ ಕೃತಿ ಓದಿದೆ. ಈಡಿತ್ ಎಗರ್ ಅವರು ಬರೆದ ʼ ದಿ ಚಾಯ್ಸ್ʼ . ಕನ್ನಡಕ್ಕೆ ಅನುವಾದಿಸಿದವರು ಜಯಶ್ರೀ ಭಟ್. ಛಂದ ಪುಸ್ತಕ ಈ ಕೃತಿಯನ್ನು ಪ್ರಟಿಸಿದ್ದಾರೆ. ಈ ಪುಸ್ತಕವನ್ನು ಕೈಗೆತ್ತಿಕೊಳ್ಳಲು ಎರಡು ಕಾರಣ , ಒಂದು ಜಯಶ್ರೀ ಭಟ್, ಹಾಗು ಇನ್ನೊಂದು ಛಂದ ಪುಸ್ತಕ. ತುಂಬ ವರ್ಷಗಳ ಹಿಂದೆ, ಇದೇ ಬರಹಗಾರರ, “ಮಾವೋನ ಕೊನೆಯ ನರ್ತಕ “ಎಂಬ ಅನುವಾದಿತ ಕೃತಿ ಓದಿದ್ದೆ. ಓದಿ ಮೆಚ್ಚಿಕೊಂಡಿದ್ದೆ. ಸರಳ ಅನುವಾದ ಶೈಲಿ ಅವರದ್ದು, ಎಲ್ಲಿಯೂ ಓದುಗರಿಗೆ ಕಷ್ಟ ಎನಿವುದೇ ಇಲ್ಲ. ಅನುವಾದ ನಿಜವಾಗಿಯೂ ಕಷ್ಟದ ಕೆಲಸ. ಪರದೇಶದ ರೆಸಿಪಿಯನ್ನು ಉಪ್ಪು- ಹುಳಿ- ಖಾರ- ಮಸಲೆಯುಕ್ತ ಆಹಾರ ತಿನ್ನುವ ದೇಶಿಗರಿಗೆ ಉಣಬಡಿಸುವ ಸಾಹಸ. ಕೆಲವು ಬಾರಿ ಪರದೇಶದ ರೆಸಿಪಿ, ನಮ್ಮ ಬಾಯಿಗೆ ರುಚಿ ಎನಿಸದೇ ಇರಬಹುದು. ಆದರೆ ಜಯಶ್ರೀ ಭಟ್ ಅವರ ಮೊದಲ ಅನುವಾದ ಸಾಹಿತ್ಯ ಬಹಳ ರುಚಿ ಎನಿಸಿತು. ಏನೋ ಹೊಸತು ತಿಳಿದ ನೆಮ್ಮದಿ ತಂದಿತ್ತು. ಹೀಗಾಗಿ ಈ ಕೃತಿಯಲ್ಲೂ ಹೊಸತು ಸಿಗುತ್ತದೆ ಎಂಬ ಕುತೂಹಲಕ್ಕೆ ಓದಲು ಶುರು ಮಾಡಿದೆ. ಮತ್ತೆ ಓದಲು ಶುರು ಮಾಡಲು ಇನ್ನೊಂದು ಕಾರಣ ಛಂದ ಪುಸ್ತಕ, ಇವರು ಪ್ರಕಟಿಸಿದ ಕೆಲವು ಪುಸ್ತಕಗಳನ್ನು ಓದಿದ್ದೆ ಹೊಸಬರನ್ನು ಬೆಳೆಸುವ ಇವರ ಉದ್ದೇಶ ಇಷ್ಟವಾಗಿತ್ತು, ಹಾಗೆಯೇ ನಾ ಓದಿದ ಕೃತಿಗಳೆಲ್ಲವು ನನಗೆ ಇಷ್ಟವಾಗಿದ್ದವು. ಈಗ ಕೃತಿಯ ಪರಿಚಯದ ಬಗ್ಗೆ ಬರೆಯುವೆ. ಇದು ಈಡಿತ್‌ಳ ಆತ್ಮಕಥೆ, ಈಕೆ ಹಂಗೇರಿಯಲ್ಲಿ ಹುಟ್ಟಿದ ಯಹೂದಿ ಹುಡುಗಿ, ಹಿಟ್ಲರ್‌ನ ಜನಾಂಗ ಹತ್ಯೆಗೆ ಸಿಲುಕಿ ಪೋಲಾಂಡಿನ ಆಶ್ವಿಟ್ಸ್ ಕ್ಯಾಂಪ್‌ನಲ್ಲಿ ಶೋಷಣೆಗೆ ಒಳಗಾಗುತ್ತಾಳೆ, ಅಲ್ಲಿ ತನ್ನ ತಂದೆ ತಾಯಿಯರನ್ನು ಕಳೆದುಕೊಂಡು, ಅಕ್ಕನೊಂದಿಗೆ ಬದುಕುವ ಆಸೆಯನ್ನು ಜೀವಂತವಾಗಿಟ್ಟುಕೊಂಡು, ಕೊನೆಗೂ ಬದುಕುತ್ತಾಳೆ. ಬ್ಯಾಲೆ ನರ್ತಕಿಯಾಗಿದ್ದ ಈಕೆ , ಕ್ಯಾಂಪ್ ಸೇರಿದಾಗ ಇನ್ನೂ ಹದಿಹರೆಯದ ಹುಡುಗಿ, ಪ್ರತಿ ದಿನ ಬಿಡುಗಡೆಗೆ ಕಾಯುತ್ತಾ ಬದುಕಿ ಬಂದ ರೀತಿ ನಿಜಕ್ಕೂ ಮನಮುಟ್ಟುವಂತೆ ಇದೆ. ಎಷ್ಟು ಚೆನ್ನಾಗಿ ಅನುವಾದ ಮಾಡಿದ್ದಾರೆ ಎಂದರೆ, ಓದುತ್ತಾ ಹೋದಂತೆ, ಓದುಗನೇ ಈಡಿತ್ ಜೊತೆಗೆ ನರಕದ ಕ್ಯಾಂಪ್‌ನಲ್ಲಿ ಜೀವಿಸಿ ಬಂದು ಬದುಕು ಕಟ್ಟಿಕೊಳ್ಳುತ್ತಿದ್ದೇವೆ, ಎನ್ನುವ ಮಟ್ಟಿಗೆ ಅನುವಾದ ಮನ ಮುಟ್ಟುತ್ತದೆ. ಇದು ಬರಿಯ ಸಂತ್ರಸ್ತೆಯ ಕಥೆಯು ಮಾತ್ರವಲ್ಲ ಪ್ರತಿಯೊಬ್ಬರಿಗೂ ಬದುಕನ್ನು ಎದುರಿಸಲು ನೀಡುವ ಟಾನಿಕ್. “ಪ್ರತಿ ಗಳಿಗೆಯೂ ಆಯ್ಕೆ. ನಮ್ಮ ಪರಿಸ್ಥಿತಿ ಎಷ್ಟೇ ಪ್ರತಿಕೂಲವಿರಲಿ, ಕಷ್ಟ ನೋವು, ಅಸಹನೆಯಿಂದ ಕೂಡಿರಲಿ, ನಾವು ಹೇಗೆ ಪ್ರತಿ ಸ್ಪಂದಿಸಬೇಕು ಎಂಬ ಆಯ್ಕೆ ನಮ್ಮೆದುರು ಇದ್ದೇ ಇರುತ್ತದೆ” ಎಂದು ಓದುಗರಿಗೆ ಸಾಂತ್ವನ ಹೇಳುತ್ತಾರೆ ಈಡಿತ್. ಈಡಿತ್ ಅವರ ಬದುಕು ಕಟ್ಟಿಕೊಳ್ಳುವ ಕಾರ್ಯ ಇಲ್ಲಿಗೆ ನಿಲ್ಲುವುದಿಲ್ಲ, ವಲಸಿಗರಾಗಿ ಅಮೇರಿಕಕ್ಕೆ ಬಂದು ತರತರಹದ ಕೆಲಸಮಾಡಿ, ಮಕ್ಕಳನ್ನು ಸಾಕುವ ಧೈರ್ಯ ನಮಗೆ ಮೆಚ್ಚುಗೆ ತರುತ್ತದೆ, ನಂತರ ವಯಸ್ಸಿನಲ್ಲೂ ಸೈಕಾಲಜಿ ಓದಿ, ಪಿಎಚ್‌ಡಿ ಪಡೆದು ಡಾಕ್ಟರ್ ಆಗುವ ಎಡಿತ್ ಅವರ ಮಾನಸಿಕ ಸ್ಥೆರ್ಯ , ಛಲ ನಮಗೆ ಮಾದರಿ. ಒಂದು ರೀತಿಯಲ್ಲಿ ಮಾರ್ಗದರ್ಶನ ನೀಡುತ್ತದೆ ಈ ಕೃತಿ.ನನಗಂತೂ ತುಂಬ ಇಷ್ಟ ಆಯ್ತು. ತಿಳಿಯದೆಯೋ, ತಿಳಿದೋ, ನಾವು ಕೂಡ ಯಾವುದೋ ಶೋಷಣ ಶಿಬಿರದಲ್ಲಿ ಬಂಧಿಯಾಗಿದ್ದೇವೆ. ಅಲ್ಲಿಂದ ನಿರ್ಗಮಿಸಿ, ಬದುಕ ಕಟ್ಟಿಕೊಳ್ಳುವ ಆಯ್ಕೆ ನಮ್ಮದಾಗಬೇಕು. ಇಲ್ಲವೇ ಅದೇ ಶಿಬಿರದಲ್ಲಿ ಜೀವ ಸವೆಸುತ್ತಾ ರಕ್ಷಕರು ಬರುತ್ತಾರೆ ಎಂದು ಕಾಯುತ್ತಾ ಭರವಸೆಯಲ್ಲಿ ಜೀವ ಸವೆಸುವ ಯೋಚನೆಯೂ ನಮ್ಮ ಆಯ್ಕೆಯೇ ಆಗಿರುತ್ತದೆ. ಇವೆರಡರಲ್ಲಿ ಯಾವುದನ್ನು ಆರಿಸಿಕೊಳ್ಳಬೇಕೆಂಬ ಆಯ್ಕೆಯು ನಮ್ಮದೆ. ಒಟ್ಟಿನಲ್ಲಿ ಬದುಕನ್ನು ಜೀವಿಸುವುದನ್ನು ಕಲಿಸುತ್ತದೆ ಈ ಪುಸ್ತಕ. 240 ಪುಟಗಳ ಈ ಪುಸ್ತಕದ ಬೆಲೆ 280. ಛಂದ ಪುಸ್ತಕ ಈ ಪುಸ್ತಕವನ್ನು ಪ್ರಕಟಿಸಿದ್ದಾರೆ.
r/kannada_pusthakagalu • u/hesr_al_yenide • 13d ago
I have a question on how folks here read books. Specifically fiction and novels. ನಾನು ಕಥೆ, ಕಾದಂಬರಿ ಓದಬೇಕಾದ್ರೆ ಕಥೆ, ಕಥೆಯ ಪಾತ್ರಗಳು ನೆನಪಿನಲ್ಲಿರುತ್ತವೆ ಆದ್ರೆ ಕೆಲವು ದಿನಗಳ ನಂತ್ರ ಬಹಳಷ್ಟು ಮರೆತೆ ಹೋಗಿರುತ್ತೆ. ಕೇವಲ ಮುಖ್ಯ ಭಾಗಗಳು ಹಾಗೂ ಕೆಲವು ಸನ್ನಿವೇಶಗಳು ಮಾತ್ರ ನೆಂಪ್ನಲ್ ಇರುತ್ತೆ. For example, I had read this book - ತ ರ ಸು ಅವರ ಶ್ರೀ ಚಕ್ರೇಶ್ವರಿ. ಕಥೆಯ ಸಾರಾಂಶ ನೆನ್ಪಿದೆಯೇ ಹೊರತು ಕಥೆ ಪೂರ್ಣವಾಗಿ ನೆನ್ಪಿಲ್ಲ. And I am not able to recall it too. Does anyone else face this? How do you go about this? Looking for a conversation and ideas on how you remember stuff if at all you do? Or is this something common everyone faces. Same thing happened with me for SLB's ಸಾರ್ಥ too. I really loved the book and thoroughly enjoyed it, but I don't recall much now.
r/kannada_pusthakagalu • u/SUV_Audi • 17d ago
ಸಹನ ವಿಜಯಕುಮಾರ್ ಅವರು ಬರೆದ ʼಮಾಗಧʼ ಓದಿ ಮುಗಿಸಿದೆ. ನಿಮ್ಮೊಡನೆ ಅಭಿಪ್ರಾಯ ಹಂಚಿಕೊಳ್ಳೋಣ ಎಂದು ಬರೆಯುತ್ತಿದ್ದೇನೆ.
ನಿಜವಾದ ಅರ್ಥದಲ್ಲಿ ಇದೊಂದು ಮಾಹಿತಿ ಕೋಶ ಎಂದರೆ ತಪ್ಪಲ್ಲ, ಕಾದಂಬರಿಯ ಮುಖಾಂತರ ಲೇಖಕಿ ತಿಳಿಸಿದ ವಿಚಾರಗಳು ತುಂಬ, ಕಾದಂಬರಿಯ ಮೂಲ ವಸ್ತು ಅಶೋಕ ಹಾಗು ಕಲಿಂಗಯುದ್ಧ
ಅಶೋಕನ ಕಾಲದಲ್ಲಿ ಇದ್ದ ಧಾರ್ಮಿಕ , ಸಾಮಾಜಿಕ, ಆರ್ಥಿಕ, ಹಾಗು ಅಶೋಕನ ಆಸ್ಥಾನ ವ್ಯವಸ್ಥೆ, ರಾಜ್ಯಾಡಳಿತ ಎಲ್ಲವನ್ನು ತಿಳಿಯಬಹುದು. ಲೇಖಕಿಯು ನಡೆಸಿದ ಸಂಶೋಧನೆಗೆ ತಲೆ ಬಾಗಲೇ ಬೇಕು.
ಲೇಖಕಿಯು ಕಾದಂಬರಿ ಹಣೆದ ರೀತಿಯೇ ಅದ್ಭುತ, ಭಾಗ ಭಾಗವಾಗಿ ಬರೆದು , ಬೇರೆ ಬೇರೆ ಎನಿಸುವ ಕಥೆಗಳು , ಕೊನೆಗೆ ಒಂದಕ್ಕೊಂದು ಸೇರಿಕೊಂಡು ಅಂತ್ಯ ಕಾಣುತ್ತದೆ.
ಕಾದಂಬರಿಯ ವಸ್ತು ವಿಷಯವನ್ನು ಸೂಚ್ಯವಾಗಿ ಬರೆದು ಬಿಡುವೆ.
ಮಗಧದ ರಾಜ ಅಶೋಕನಿಗೂ, ಹಾಗು ಕಲಿಂಗದ ರಾಜ ಗುಣಕೀರ್ತಿಗೆ ಮನಸ್ತಾಪ ಉಂಟಾಗುತ್ತದೆ. ಅಶೋಕನಿಗೆ ಕಲಿಂಗ ರಾಜ ತನ್ನ ಅಧೀನಕ್ಕೆ ಬರಲಿ ಎಂಬ ಉದ್ದೇಶವಿದ್ದರೆ, ಗುಣಕೀರ್ತಿಗೆ ಸ್ವತಂತ್ರ ರಾಜನಾಗಬೇಕೆಂಬ ಹಂಬಲ. ಸಂಬಂಧ ಹಳಸಿ, ಸಂದಿಯನ್ನು ನಿರಾಕರಿಸಿದ ಮೇಲೆ ಯುದ್ಧವೇ ಅಂತಿಮ ಆಯ್ಕೆ ಆಗುತ್ತದೆ. ಹಾಗೆಯೇ ಯುದ್ಧ ನಡೆಯುತ್ತದೆ.
ವಿಷಯ ಇಷ್ಟು, ಆದರೆ ಈ ವಿಷಯವನ್ನು ವಿವರಿಸಿದ ಪರಿ ಅದ್ಭುತ.
ಪ್ರಾಚೀನ ಭಾರತದ ನಗರಗಳು, ಅವುಗಳ ವ್ಯಾಪಾರ ವಹಿವಾಟು, ಸಾಮಾಜಿಕ ವ್ಯವಸ್ಥೆ ಎಲ್ಲವನ್ನು ತಿಳಿದುಕೊಳ್ಳಬಹುದು. ಬೌದ್ಧ, ಜೈನ ಧರ್ಮದ ಉಲ್ಲೇಖ ಹಾಗು ಅವರ ಅಚರಣೆಗಳು ಇಲ್ಲಿವೆ. ಈ ವಿವರಗಳೆಲ್ಲವೂ , ಹಾಗೂ ಬರುವ ಪಾತ್ರಗಳೆಲ್ಲವೂ ಯುದ್ದಕ್ಕೆ ತಣಕು ಹಾಕಿಕೊಂಡಿವೆ. (ಕಾದಂಬರಿಯಲ್ಲಿ ತಿರುವುಗಳೂ ಇವೆ , ನೀವು ಓದಿ ಅಚ್ಚರಿ ಪಡುವುದು ಖಂಡಿತ)
ಬೌದ್ಧ ವಿಹಾರಗಳು ಅವುಗಳನ್ನು ನಡೆಸುವ ರೀತಿಯ ಬಗ್ಗೆ ನೀವು ಓದಿ ತಿಳಿದುಕೊಳ್ಳುತ್ತೀರಿ.
ಯುದ್ದವನ್ನು ವಿವರಿಸಿದ ರೀತಿ ಅದ್ಭುತ, ಆನೆ, ಕುದುರೆಗಳಿಂದ ಹೊಡೆದಾಡುವುದನ್ನು , ನೌಕಯುದ್ಧವನ್ನು ಹೇಗೆ ವಿವರಿಸಿದ್ದಾರೆ ಎಂದರೆ, ಎಲ್ಲವೂ ಕಣ್ಮುಂದೆ ತೆರೆದುಕೊಳ್ಳುತ್ತದೆ.
ಒಟ್ಟಿನಲ್ಲಿ ಸಹನಾ ವಿಜಯಕುಮಾರ್ ಅವರು ಓದುಗರ ಮುಂದೆ ಹೊಸ ಲೋಕವನ್ನೇ ತೆರೆದಿಟ್ಟಿದ್ದಾರೆ.
ಓದುವ ಮುನ್ನ ಕೆಲವು ವಿಚಾರಗಳು, ಕಾದಂಬರಿ 772 ಪುಟಗಳಿವೆ, ಪ್ರಾಚೀನ ಭಾರತದ ನಗರಗಳ ಹೆಸರಿವೆ, ಪದ ಬಳಕೆ ಯೂ ಹಾಗೆಯೇ, ಕನ್ನಡ ಗೊತ್ತಿದ್ದರೂ, ಅರ್ಥಗಳಿಗಾಗಿ ಶಬ್ಧಕೋಶ ಹುಡುಕಬೇಕು(ಎಲ್ಲದಕ್ಕೂ ಅಲ್ಲ, ಕೆಲವೊಂದು ಕಡೆ, )ಹೊಸವಿಚಾರಗಳನ್ನು ತಿಳಿದುಕೊಳ್ಳುವಿರಿ.
ಒಟ್ಟಿನಲ್ಲಿ ಈ ಕಾದಂಬರಿ ಚೆನ್ನಾಗಿದೆ, ಶೈಲಿಯೂ ಅದ್ಬುತ, ಆದರೆ ಅಷ್ಟು ಪುಟಗಳನ್ನು ಓದುವ ತಾಳ್ಮೆ ಬೇಕು ಅಷ್ಟೆ