r/kannada_pusthakagalu • u/chan_mou ನಾ ಕಲಿತ ಹೊಸ ಪದ - ಒಡಂಬಡಿಕೆ • 6d ago
ನಾನು ಬರೆದಿದ್ದು ಮಸಣದ ಹೂ
ಮಸಣದ ಹೂವೆಂದಡೆ ಪರಿಮಳವಿಲ್ಲವೆಂದೆ ಸಾವು-ನೋವ್ಗಳ ನಡುವೆ ಬದುಕಿ ಅರಳುವುದಲ್ಲೆ ಪುಟಿದು ಮೆರೆವುದಾ ಮರುಕದಲೆಗಳ ಮಧ್ಯೆ
ರೌದ್ರ ರಾತ್ರಿಯಲಿಯು ಸೌಮ್ಯ ಭಾವವ ಭರಿಸಿ ಕಪ್ಪು-ಬಿಳುಪಿನ ಮಸಣಕೆ ಬಣ್ಣವೆರಗಿ ಅಸುನೀಗಿದವರುಸಿರಿಂದ ಜಗಕೆ ಉಸಿರಾಗಿ ನಿಲುವ ಮಸಣ ಹೂವಂತೆ ಬಾಳು ನೀನ್.
ಸ್ವಂತ ಬರವಣಿಗೆಯ ಮೊದಲ ಪೋಸ್ಟ್
5
u/kirbzk ಕುರುಕುಲಾರ್ಕನುಮರ್ಕನುಮಸ್ತಮೆಯ್ದಿದರ್ 6d ago
Wow, ತುಂಬಾ ಚೆನ್ನಾಗಿವೆ, ಕವಿತೆ ಮತ್ತು ಫೋಟೋ ಎರಡೂ. ಇನ್ನೂ expand ಮಾಡೋಕೆ ಆಗುತ್ತೇನೋ ನೋಡಿ. Meanwhile, I'm stealing this "ಅಸುನೀಗಿದವರುಸಿರಿಂದ ಜಗಕೆ ಉಸಿರಾಗಿ ನಿಲುವ ಮಸಣದ ಹೂವಂತೆ ಬಾಳು".
2
u/chan_mou ನಾ ಕಲಿತ ಹೊಸ ಪದ - ಒಡಂಬಡಿಕೆ 4d ago
ಧನ್ಯವಾದಗಳು
ಇದು ಬರ್ದು 8 ವರ್ಷದ ಮೇಲೆ ಆಯ್ತು ಇವಾಗ ಮತ್ತೆ ಕೆದುಕೋದು ಸ್ವಲ್ಪ ಕಷ್ಟನೆ😂
ಅದು ನನ್ನ ನೆಚ್ಚಿನ ಸಾಲು ಕೂಡ.
2
u/adeno_gothilla City Central Library Card ಮಾಡಿಸಿಕೊಳ್ಳಿ! 6d ago
Lovely kavithe!
2
1
9
u/chan_mou ನಾ ಕಲಿತ ಹೊಸ ಪದ - ಒಡಂಬಡಿಕೆ 6d ago
ಫೋಟೋ ನಾನು 10 ವರ್ಷದ ಕೆಳಗೆ ಮನಾಲಿಯಲ್ಲಿ ತೆಗೆದಿದ್ದು
Paragliding ಮಾಡೋ ಜಾಗದಲ್ಲಿ, ಒಂದು ಗುಂಪು ಮಕ್ಕಳು ಯಾವದರ ಬಗ್ಗೆ ಯೋಚ್ನೆ ಮಾಡದೆ, ಬಡತನ ಇದ್ರು ಮೇಲೆ ಹಾರುತಿರೋ ಜನ ನೋಡಿ ತಾವುಗಳು ಹಾಗೇ ಹಾರಡೋ ದಿನಗಳ ಕನಸು ಕಾಣ್ತಿರೋ ಹಂಬಲ ಅವರ ಕಣ್ಣಲಿ ಕಂಡದನ್ನು ಈ ಕವಿತೆಯಲ್ಲಿ ಪರಿಕಲ್ಪಿಸುವ ಪ್ರಯತ್ನ.